Category «ಪುರಾಣ ಕಥೆಗಳು»

“ಜಗದ್ಗುರು ಶ್ರೀಸುಧೀಂದ್ರತೀರ್ಥರು”

‘ಜಗದ್ಗುರು ಶ್ರೀಸುಧೀಂದ್ರತೀರ್ಥರು’ ಶ್ರೀಹಂಸನಾಮಕನ ಸತ್ಪರಂಪರೆಯಲ್ಲಿ, ಶ್ರೀಮನ್ಮಧ್ವಾಚಾರ್ಯರಿಂದ ಹದಿನೈದನೇಯ ಪೀಠಾಧಿಪತಿಗಳಾಗಿ ಶ್ರೀಮನ್ಮಧ್ವಮತವನ್ನು ವಿಶಿಷ್ಟ ಆಯಾಮದಲ್ಲಿ ಪ್ರತಿಷ್ಠಾಪನೆ ಮಾಡಿದವರೇ ಶ್ರೀಸುಧೀಂದ್ರತೀರ್ಥರು.  ಸಕಲವಿದಜನಕುಮುದವನ ಕೌಮುದೀಶರಾದ, ಭಗವಂತನ ವಿಶಿಷ್ಟಕರುಣೆಗೆ ಪಾತ್ರರಾದ, ಶ್ರೀಸುರೇಂದ್ರತೀರ್ಥರೇ ಇವರ ಆಶ್ರಮ ಗುರುಗಳು, ಚತುಷ್ಷಷ್ಟಿಕಲಾಪ್ರಾವೀಣ್ಯದಿಂದ ಆಸ್ತಿಕ್ಯವನ್ನು ಪುಷ್ಟೀಕರಿಸಿದ, ಚತುರಧಿಕಶತಗ್ರಂಥರತ್ನಪ್ರಣೇತರಾದ (104 ಗ್ರಂಥಗಳನ್ನು ಕರುಣಿಸಿದ), ಚಾತುರ್ಯಕ್ಕೆ ಹೆಸರಾದ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ಇವರ ಗುರುಗಳಾದರೇ, ನಾಸ್ತಿಕ್ಯವನ್ನು ಒದ್ದೋಡಿಸಿದ, ಆಸ್ತಿಕರ ಆರಾಧ್ಯರಾದ, ಶ್ರೀಮನ್ಮಧ್ವಮತಸಂವರ್ಧಕರಾದ ಶ್ರೀಮನ್ಮಂತ್ರಾಲಯಪ್ರಭುಗಳು, ಹಾಗೂ ತಪಸ್ವಿಗಳಾದ ಗ್ರಂಥಕಾರರಾದ ಶ್ರೀಯಾದವೇಂದ್ರತೀರ್ಥರು ಇವರ ವಿದ್ಯಾಶಿಷ್ಯರು, ಆಶ್ರಮಶಿಷ್ಯರು. ಇಂತಹ ಲೋಕೋತ್ತರ ಕಾರ್ಯಗಳನ್ನು ಮಾಡಿದ ಗುರುಗಳನ್ನೂ, ಶಿಷ್ಯರನ್ನು ಪಡೆದ …

ಮಹಾಭಾರತದ ಅಪರಿಚಿತ ಈತ – ಬರ್ಬರೀಕ

ಬರ್ಬರೀಕ, ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ. ಇವನು ಬಿಲ್ವಿದ್ಯೆಯಲ್ಲಿ ಅಪ್ರತಿಮ ಶೂರ. ತಪಶ್ಚರ್ಯ ನಡೆಸಿ ಮಹಾದೇವನಾದ ರುದ್ರದೇವರಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹೆಚ್ಚಿತ್ತು ಬರ್ಬರೀಕನ ಶೌರ್ಯ. ಇಂಥಾ ಬರ್ಬರೀಕ ಕುರುಕ್ಷೇತ್ರ ಯುದ್ಧ ಘೋಷಣೆಯಾದಾಗ ತಾನೂ ಯುದ್ಧದಲ್ಲಿ ಪಾಲ್ಗೊಳ್ಳುವೆನೆಂದು ರಣಾಂಗಣಕ್ಕೆ ಬರುತ್ತಾನೆ. ಆಗ ಕೃಷ್ಣ ಯುದ್ಧದ ತಯಾರಿ ನಡೆಸುತ್ತಾ, “ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು?” ಎಂದು ಕೌರವ – …