Monthly archives: April, 2019

ಯುಗಾದಿಹಬ್ಬದ ಶುಭಾಶಯಗಳು

ಗುರುರಾಯರೇ ಶ್ರೀಸುಶಮೀಂದ್ರತೀರ್ಥರ ಉಸಿರು. ಅವರು ಕೊಟ್ಟಂತಹ ಮೂಲಮಂತ್ರ “ರಾಯರನ್ನ ನಂಬಿ – ನಂಬಿದ ಭಕ್ತರನ್ನು ರಾಯರು ಎಂದಿಗೂ ಕೈ ಬಿಡುವುದಿಲ್ಲ”. ಯುಗಾದಿಹಬ್ಬದ ಶುಭಾಶಯಗಳು ಶ್ರೀವಿಕಾರಿ ನಾಮ ಸಂವತ್ಸರದ ಶುಭಾಶಯಗಳು.

ಶ್ರೀಸುಶಮೀಂದ್ರತೀರ್ಥರು ಅವತರಿಸಿದ ದಿನ.

ಶ್ರೀಸುಪ್ರಜ್ಞೇಂದ್ರಾಚಾರ್ಯರು ಜನಿಸಿದ್ದು ಅಕ್ಷಯನಾಮ ಸಂವತ್ಸರದ ಅಧಿಕ ಚೈತ್ರ ಬಹುಳ ಪಂಚಮಿ, ಶನಿವಾರ, ನಂಜನಗೂಡಿನ ‘ದೊಡ್ಡಮನೆ’ಯಲ್ಲಿ. ಆಂಗ್ಲಕಾಲಮಾನದಲ್ಲಿ ದಿನಾಂಕ 03/04/1926ರಂದು. ಗೌತಮ ಗೋತ್ರದ, ಬೀಗಮುದ್ರೆ ಮನೆತನದಲ್ಲಿ, ರಾಯರ ಪೂರ್ವಾಶ್ರಮ ವಂಶದಲ್ಲಿ, ರಾಯರ ಅಂತರಂಗ ಭಕ್ತರ ಜನನ. ಈ ಘಳಿಗೆ ಜ್ಯೋತಿಷ್ಯಾಸ್ತ್ರದ ಲೆಕ್ಕಾಚಾರದಲ್ಲಿ ‘ಗಜಕೇಸರೀ’ ಯೋಗದಿಂದ ಕೂಡಿತ್ತು. ರಕ್ತಾಕ್ಷಿ ನಾಮ ಸಂವತ್ಸರದ ಫಾಲ್ಗುಣ ಕೃಷ್ಣ ಪಕ್ಷದ ದ್ವಾದಶಿಯ ದಿನ. ರಾಯರ ಸಂಕಲ್ಪಕ್ಕೆ ಅನುಗುಣವಾಗಿ ಶ್ರೀಸುಜಯೀಂದ್ರತೀರ್ಥರು ಯೋಜಿಸಿದ್ದ ಮಹತ್ಕಾರ್ಯದ ಬೀಜ ಮೊಳಕೆಯೊಡೆಯಿತು. ರಾಯಚೂರಿನಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕಾಗಿ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿಯೇ …