Category «Uncategorized»

ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ

ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ ಗುರುಸಾರ್ವಭೌಮರ ವರ್ಧಂತೀ ಮಹೋತ್ಸವ – ಶ್ರೀರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ. ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ,ಅನೇಕಕಲಾಪ್ರಾವೀಣ್ಯದಿಂದ, ಪಾಂಡಿತ್ಯಾದಿ ಸದ್ಗುಣಗಳಿಂದ ಜಗದ್ವಿಖ್ಯಾತವಾದ ಮನೆತನದಲ್ಲಿ ಸಕ್ಷಾತ್ ಪ್ರಹ್ಲಾದರಾಜರೇ ಅವತರಿಸಿದ ಪರಮಮಂಗಲಕರ ದಿನ. ಶ್ರೀರಾಘವೇಂದ್ರಗುರುಸಾರ್ವಭೌಮರ ದಿವ್ಯವಾದ ಚರಿತ್ರೆಯನ್ನು ತಿಳಿಸುವ ಮಹೋಪಕಾರವನ್ನು ಮಾಡಿದ ನಾರಾಯಣಾಚಾರ್ಯರ ಆಪ್ತತ್ವ, ಈ ಗ್ರಂಥದ ಪ್ರಸ್ತುತಿಯ ಹಿನ್ನೆಲೆ, ಆ ಗ್ರಂಥದಲ್ಲಿ ಪ್ರತಿಪಾದಿತವಾಗಿರುವ ಮಧ್ವವಿಜಯದ ಪ್ರತಿಬಿಂಬತ್ವ ಇವೆಲ್ಲವೂ ಶ್ರೀರಾಘವೇಂದ್ರವಿಜಯದ ಪರಮಪ್ರಾಮಾಣಿಕತ್ವವನ್ನು, ಶ್ರೆಷ್ಠತ್ವವನ್ನು ತಿಳಿಸುವ ಪ್ರಮುಖ ವಿಚಾರಗಳು. ಶ್ರೀರಾಘವೇಂದ್ರಗುರುರಾಜರೇ ಇದನ್ನು ಪರಿಶೀಲಿಸಿ ಪ್ರಮಾಣೀಕರಿಸಿರುವದರಿಂದ ಇದರ ಮೌಲ್ಯ …

ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ.

ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ. ಇಂತಹ ವಿದ್ವಾಂಸರಾದ ಶ್ರೇಷ್ಠಕರ್ತೃಗಳಿಂದ ರಚಿತವಾದ, ಸಕಲ ಸಲ್ಲಕ್ಷಣಗಳಿಂದ ಉಪೇತವಾದ ಈ ಮಹಾಕಾವ್ಯವು ಸಜ್ಜನರಿಗೆ ಅತ್ಯಂತ ಗ್ರಾಹ್ಯವಾಗಿದೆ. ಶೈಲಿ, ಪ್ರೌಢಿಮೆ, ವಿಷಯನಿರೂಪಣೆ, ಕಾವ್ಯಲಕ್ಷಣಗಳಲ್ಲಿ ಇದು ಶ್ರೀಸುಮಧ್ವವಿಜಯವನ್ನೇ ಹೋಲುತ್ತದೆ. ಶ್ರೀಸುಮಧ್ವವಿಜಯದ ಕರ್ತೃಗಳಾದ ಶ್ರೀನಾರಾಯಣಪಂಡಿತಾಚಾರ್ಯರೇ ಈ ಮಹಾಕಾವ್ಯರಚನೆಗೆ ಸ್ಫೂರ್ತಿ ಎನ್ನುವುದು ಎಂದು ಶ್ರೀರಾಘವೇಂದ್ರವಿಜಯ ಕರ್ತೃಗಳಾದ ನಾರಾಯಣಾಚಾರ್ಯರ ಮಾತುಗಳಿಂದಲೇ ತಿಳಿಯಬಹುದು.ಅಂತೆಯೇ ಶ್ರೀಸುಮಧ್ವವಿಜಯದ ಪಾರಾಯಣ-ಪ್ರವಚನಗಳು ಸಕಲ ಐಹಿಕ-ಪಾರಮಾರ್ಥಿಕ ಸಂಪತ್ತನ್ನು ಕರುಣಿಸುವಂತೆ, ಶ್ರೀರಾಘವೇಂದ್ರವಿಜಯವೂ ಈ ವಿಷಯದಲ್ಲಿ ಸಮರ್ಥವಾಗಿದೆ ಎನ್ನುವುದರಲ್ಲಿ ಲೇಶಸಂಶಯವೂ ಇಲ್ಲ. ಈ ರೀತಿ ಶ್ರೀರಾಘವೇಂದ್ರ ಗುರುಗಳ ಪೂರ್ವಾಶ್ರಮಜೀವನ, ಯತ್ಯಾಶ್ರಮಜೀವನವನ್ನು …

Home

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೂರ್ವಪೀಠಾಧಿಪತಿಗಳಾಗಿದ್ದ, ನಡೆದಾಡುವ ರಾಯರೆಂದು ಭಕ್ತಕೋಟಿಯಲ್ಲಿ ಪ್ರಖ್ಯಾತರಾಗಿದ್ದ ಶ್ರೀಸುಶಮೀಂದ್ರತೀರ್ಥರ ಸಮಾನಮನಸ್ಕ ಭಕ್ತರು ಪ್ರಾರಂಭಿಸಿರುವ ಸಾಮಾಜಿಕ ಸಂಸ್ಥೆ “ಶ್ರೀಸುಶಮೀಂದ್ರ ಸೇವಾ ಪ್ರತಿಷ್ಠಾನ”. ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರ ಅಭಿಪ್ರಾಯಗಳನ್ನು ಅವರ ಆಶಯದಂತೆಯೇ ಕ್ರಿಯಾರೂಪದಲ್ಲಿ ತಂದು, ಸಮಾಜದ ಎಲ್ಲ ವರ್ಗದ ಜನರ ಬದುಕು ರಾಯರ ಅನುಗ್ರಹದಿಂದ ಹಸನುಗೊಳಿಸುವ ಅವರ ಕನಸನ್ನು ಎಲ್ಲ ಸಾಧ್ಯವಾದ ರೀತಿಯಲ್ಲಿ ಸಾಕಾರಗೊಳಿಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶ. ಉತ್ತಮ ಸಮಾಜಕ್ಕೋಸ್ಕರ ಉತ್ತಮ ಮನಸ್ಸುಗಳ ನಿರ್ಮಾಣವೆನ್ನುವುದು ಕೇವಲ ಕೆಲವೇ ವ್ಯಕ್ತಿಗಳ ಮೂಲಕ ಆಗುವಂಥದಲ್ಲವಾದ್ದರಿಂದ …