Sri Vishnu Teerthara 212th Aradhana

ಶ್ರೀ ವಿಷ್ಣುತೀರ್ಥರ ಸಂಕ್ಷಿಪ್ತ ಮಾಹಿತಿ

ಹೆಸರು : ಶ್ರೀ ಜಯತೀರ್ಥಾಚಾರ್ಯರು
ತಂದೆ : ಶ್ರೀ ಬಾಳಾಚಾರ್ಯರು
ತಾಯಿ : ಸಾಧ್ವೀ ಭಾಗೀರಥೀಬಾಯಿ
ಕಾಲ : ಕ್ರಿ 1756 – 1806
ಜನ್ಮಸ್ಥಳ : ಸವಣೂರು ಹತ್ತಿರವಿರುವ ಸಿದ್ಧಾಪುರ ಗ್ರಾಮ
ಅಂಶ : ಶ್ರೀ ರುದ್ರದೇವರು
ಸ್ವರೂಪೋದ್ಧಾರಕ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ವಿದ್ಯಾ ಗುರುಗಳು : ಐಜಿ ಶ್ರೀ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞರು )
ಆಶ್ರಮ ಗುರುಗಳು : ಶ್ರೀ ಸತ್ಯವರ ತೀರ್ಥರು
ಬೃಂದಾವನ ಸ್ಥಳ : ಮಾದನೂರು
ಆರಾಧನೆ : ಮಾಘ ಬಹುಳ ತ್ರಯೋದಶೀ ( ಮಹಾ ಶಿವರಾತ್ರಿ )

 

ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।

Sanskrit :
विष्णुतीर्थः कल्पवृक्षो विष्णुतीर्थश्च कामधृक् ।
चिंतामणिर्विष्णुतीर्थो यतींद्रः कामदः ॥

Telugu :
విష్ణుతీర్థః కల్పవృక్షో విష్ణుతీర్థశ్చ కామధృక్ |
చింతామణిర్విష్ణుతీర్థో యతీంద్రః కామదః ||

Tamil :
விஷ்ணுதீர்தஃ கல்பவ்ருக்ஷோ விஷ்ணுதீர்தஶ்ச காமத்ருக் |
சிம்தாமணிர்விஷ்ணுதீர்தோ யதீம்த்ரஃ காமதஃ ||

viShNutIrthaH kalpavRukShO viShNutIrthaSca kAmadhRuk |
ciMtAmaNirviShNutIrthO yatIMdraH kAmadaH ||

ಶ್ರೀ ವಿಷ್ಣುತೀರ್ಥರಂಥಾ ಮಹಾತ್ಮರು ಜನಿಸುವುದು ವಿರಳ. ಇಂಥಾ ಉತ್ತಮ ಶ್ಲೋಕರ ಗುಣಾನುಕಥನವು ಪರಮ ಶ್ರೇಯಸ್ಸಿಗೆ ಕಾರಣವಾಗಿದೆ. ಇವರ ಚರಿತ್ರೆಯು ಜನತೆಗೆ ಮಾರ್ಗದರ್ಶನವೂ ಆಗಿದೆ. ಶ್ರೀ ವಿಷ್ಣುತೀರ್ಥರು ಕ್ರಿ ಶ 1756ನೇ ಶ್ರಾವಣ ಬಹುಳ ಅಷ್ಟಮೀ ಸವಣೂರು ಪ್ರಾಂತ ” ಸಿದ್ಧಾಪುರ ” ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶ್ರೀ ಬಾಳಾಚಾರ್ಯರು ಮತ್ತು ತಾಯಿ ಸಾಧ್ವೀ ಭಾಗೀರಥೀಬಾಯಿ. ಈ ದಂಪತಿಗಳು ಮಹಾ ಸದಾಚಾರ ಸಂಪನ್ನರೂ, ಆಚಾರ ನಿಷ್ಠರೂ ಆಗಿದ್ದರು. ಈ ದಂಪತಿಗಳಿಗೆ ಬಹುದಿನ ಮಕ್ಕಳಾಗದ ಕಾರಣ ಶ್ರೀ ಜಯತೀರ್ಥರ ಸೇವೆ ಮಾಡಿದರು. ಶ್ರೀ ಜಯತೀರ್ಥರ ಪರಮಾನುಗ್ರಹದಿಂದ ಹುಟ್ಟಿದ ಕಾರಣ ಇವರಿಗೆ ” ಜಯತೀರ್ಥ ” ಎಂದು ನಾಮಕರಣ ಮಾಡಿದರು. ಜನ್ಮಾಷ್ಟಮಕ್ಕೆ ಉಪನಯನಾದಿಗಳು ಮಾಡಿದರು.

ಮಂತ್ರಾಲಯ ಪ್ರಭುಗಳ ಕಾರುಣ್ಯ

ಜಯತೀರ್ಥನ ಶಕ್ತಿ; ಕುಶಾಗ್ರ ಮತಿ ಮತ್ತು ವಿದ್ಯಾಸಕ್ತಿಯನ್ನು ಕಂಡು ಶ್ರೀ ಬಾಳಾಚಾರ್ಯರು ಸಂತೋಷ ಪಟ್ಟು ಪ್ರೌಢ ಶಿಕ್ಷಣವನ್ನು ಯೋಗ್ಯ ಗುರುಗಳಿಂದ ಕೊಡಿಸಿ ಅವರನ್ನು ವಿದ್ವಾಂಸರನ್ನಾಗಿ ರೂಪಿಸಬೇಕೆಂದು ಬಯಸೀ ಇದಕ್ಕಾಗಿ ಯೋಗ್ಯ ಪಂಡಿತಾಗ್ರೇಸರರನ್ನು ಆಶ್ರಯಿಸಬೇಕೆಂದು ವಿಚಾರ ಮಾಡಿ ತಮ್ಮ ಮಗನಿಗೆ ಯೋಗ್ಯ ಗುರುಗಳನ್ನು ತೋರಿಸಲು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೊಬ್ಬರೇ ಸಮರ್ಥರೆಂದು ತಿಳಿದು ಮಗನೊಂದಿಗೆ ಶ್ರೀ ಬಾಳಾಚಾರ್ಯರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದರು.

ಶ್ರೀ ಬಾಳಾಚಾರ್ಯರು ಮಗನೊಂದಿಗೆ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಶುಭ್ರನಾಗಿ ಬಂದು ಶ್ರೀ ಗುರುಸಾರ್ವಭೌಮರ ವೃಂದಾವನದ ಮುಂದೆ ನಿಂತು ” ತನಗೆ ಜ್ಞಾನ ತೋರುವ ಯೋಗ್ಯ ಗುರುವನ್ನು ತೋರಿಸು ” ಎಂದು ಜಯತೀರ್ಥನು ವಿನಮ್ರವಾಗಿ ಪ್ರಾರ್ಥಿಸಿದ!

ವಿದ್ಯಾ ಪಕ್ಷಪಾತಿಗಳೂ; ಭಕ್ತ ಶಿಷ್ಯ ಜನೋದ್ಧಾರಕರೂ; ಕಲಿಯುಗ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರೂ; ಅಘಟಿತಘಟನಾ ಕಾರ್ಯ ಮಾಡುವುದರಲ್ಲಿ ಸಮರ್ಥರೂ ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರೇ ” ಕರುವನ್ನು ( ಜಯತೀರ್ಥ ) ಹಸುವಿನ ( ಐಜಿ ಶ್ರೀ ವೇಂಕಟರಾಮಾಚಾರ್ಯರು ) ಬಳಿ ಸೇರಿಸುವ ಅದೃಶ್ಯ ಸೂತ್ರಧಾರರಾಗಿ, ಪಂಡಿತ ಶ್ರೇಷ್ಠ ಶ್ರೀ ಐಜಿ ವೇಂಕಟರಾಮಾಚಾರ್ಯರನ್ನು ಮಂತ್ರಾಲಯಕ್ಕೆ ಬರುವಂತೆ ಪ್ರೇರೇಪಿಸಿದರು.

ನೀತ ಗುರುಗಳಿಗಾಗಿ ಹಂಬಲಿಸುತ್ತಾ ತಮ್ಮನ್ನಾಶ್ರಯಿದ ಜಯತೀರ್ಥನಿಗೆ ಶ್ರೀ ಐಜಿ ವೇಂಕಟರಾಮಾಚಾರ್ಯರಂಥಾ ಜ್ಞಾನಿ ಶ್ರೇಷ್ಠರನ್ನು ಶ್ರೀ ಗುರುರಾಜರು ಕರುಣಿಸಿದರು. ಜಯತೀರ್ಥನಂತೂ ಶ್ರೀ ಐಜಿ ವೇಂಕಟರಾಮಾಚಾರ್ಯರ ದರ್ಶನ ಮಾತ್ರದಿಂದಲೋ ಪುಲಕಿತನಾದನು. ಎಷ್ಟೋ ಜನ್ಮಗಳ ಸಂಬಂಧವಿರುವಂತೆ ಭಾವವಿಷ್ಟನಾಗಿ ಅವರ ಸಾಮಿಪ್ಯವನ್ನು ಬಯಸಿದನು.

ಶ್ರೀ ಐಜಿ ವೇಂಕಟರಾಮಾಚಾರ್ಯರ ಕೃಪಾ ದೃಷ್ಟಿ

ಶ್ರೀ ಜಯತೀರ್ಥರ ನಾಮ ಇಟ್ಟುಕೊಂಡಿದ್ದರಿಂದ ಇವರು ಪರಮ ವೈರಾಗ್ಯಶಾಲಿಗಳಾಗುತ್ತಾರೆ. ವೇಣೀಸೋಮಾಪುರದ ಶ್ರೀ ಐಜಿ ವೆಂಕಟರಾಮಾಚಾರ್ಯರಲ್ಲಿ ಬ್ರಹ್ಮಚರ್ಯದಿಂದ ಅಧ್ಯಯನ ಮಾಡಿ ಸಾಹಿತ್ಯ – ತರ್ಕ – ವ್ಯಾಕರಣ – ಮೀಮಾಂಸಾ – ನ್ಯಾಯ – ವೇದಾಂತಗಳಲ್ಲಿ ಘನ ಪಂಡಿತರಾದರು.

ಇವರ ಗುರುಗಳಾದ ಶ್ರೀ ಐಜಿ ಆಚಾರ್ಯರ ಜೀವನವೂ, ಶ್ರೀ ವಿಷ್ಣುತೀರ್ಥರ ಜೀವನವೂ ಒಂದೇ ರೀತಿಯಾಗಿರುವುದು ಆಶ್ಚರ್ಯಕರವಾಗಿದೆ. ಶ್ರೀ ಐಜಿ ಆಚಾರ್ಯರು ಗೃಹಸ್ಥಾಶ್ರಮಿಗಳಯಾಗಿ ಪಾಠ ಪ್ರವಚನ ನಿರತರಾಗಿ ಮುಂದೆ ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನ್ನವಾಗಿ ನಡೆದುಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮುಖ್ಯ ಸಂಸ್ಥಾನವಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಹಾಪೀಠಸ್ಥರಾದ ಶ್ರೀ ಭುವನೇಂದ್ರತೀರ್ಥರಿಂದ ಸಂನ್ಯಾಸ ಸ್ವೀಕಾರ ಮಾಡಿ ” ವ್ಯಾಸತತ್ತ್ವಜ್ಞತೀರ್ಥ ” ರೆಂದು ನಾಮಕರಣ ಹೊಂದಿ ಮಠ – ಮಾನ್ಯಗಳನ್ನೂತೊರೆದು ಗ್ರಂಥ ರಚನೆ ಮತ್ತು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿ ಅಪರೋಕ್ಷಜ್ಞಾನಿಗಳಾಗಿ ಬೃಂದಾವನಸ್ಥರಾದರು. ಹೀಗೆಯೇ ಶ್ರೀ ವಿಷ್ಣುತೀರ್ಥರ ಜೀವನದಲ್ಲಿಯೂ ಜರುಗುತ್ತದೆ.

” ಗುರು ಪುತ್ರನ ಅಪಮೃತ್ಯು ಪರಿಹಾರ “

ಶ್ರೀ ಜಯತೀರ್ಥಾಚಾರ್ಯರು ವೇಣಿಸೋಮಪುರದಲ್ಲಿ ಶ್ರೀ ಐಜಿ ವೇಂಕಟರಾಮಾಚಾರ್ಯರ ಆಶ್ರಯದಲ್ಲಿದ್ದಾಗ ಅವರ ಮಕ್ಕಳಾದ ಶ್ರೀ ಗೋಪಾಲಕೃಷ್ಣಾಚಾರ್ಯರಿಗೆ ಪ್ರಾರಬ್ಧ ವಶಾತ್ ಅಪಮೃತ್ಯು ಪ್ರಾಪ್ತವಾದಾಗ ಗುರುಗಳ ಆಜ್ಞೆಯಂತೆ ” ಶ್ರೀ ನೃಸಿಂಹ ಮಂತ್ರ ” ವನ್ನು ಒಂದು ಸಪ್ತಾಹ ಜಪ ಮಾಡಿ ಅವರ ಅಪಮೃತ್ಯುವನ್ನು ಪರಿಹಾರ ಮಾಡಿದರು. ಹೇಳಿ ಕೇಳಿ ಮೊದಲೇ ಇವರು ಮೂಲ ರೂಪದಲ್ಲಿ ನೃಸಿಂಹೋಪಾಸಕರಲ್ಲವೇ!

ಪ್ರೌಢ ಗ್ರಂಥಗಳ ಅಧ್ಯಯನ

ಶ್ರೀವಿಷ್ಣುತೀರ್ಥರು ರಚಿಸಿದ ಗ್ರಂಥಗಳು

ಶ್ರೀಕೃಷ್ಣಾಷ್ಟಕ
ಶ್ರೀರಮಾ ಸ್ತೋತ್ರ
ಸುಮಧ್ವವಿಜಯ ಪ್ರಮೇಯ ಫಲಮಾಲಿಕಾ
ಆಧ್ಯಾತ್ಮಾಮೃತ ರಸರಂಜನೀ
ಮುಕ್ತ ಮಾಲಾ
ನ್ಯಾಯಸುಧಾ ಸ್ತೋತ್ರ
ಭಾಗವತಧರ್ಮ ಸ್ತೋತ್ರ
ಉಪದೇಶ ಪತ್ರ
ಆಜ್ಞಾ ಪತ್ರಮ್ (ಉಪನ್ಯಾಸಃ)
ಆತ್ಮಸುಖಬೋಧಿನೀ ಪತ್ರಿಕಾ
ಬಿಂಬಾರ್ಪಣ ವಿಧಿಃ
ಶ್ರೀಮನ್ಯಾಯಸುಧಾ ಟಿಪ್ಪಣಿ (ರಸ ರಂಜನೀ)
ಷೋಡಶೀ
ಚತುರ್ದಶೀ
ತತ್ವಪ್ರಕಾಶಿಕ ಟಿಪ್ಪಣಿ (ಸುಮನೋರಂಜನೀ)
ಧ್ಯಾನ(ಸ್ನಾನ) ವಿಧಿ
ಶ್ರೀಮದ್ಭಾಗವತಸಾರೋದ್ಧಾರಃ
ಶ್ರೀಮದ್ಭಾಗವತ ಧೃತಸಾರಃ
ಬಿಂಬಸ್ತುತಿಃ
ಶ್ರೀಅಚ್ಯುತಾನಂತ ಸ್ತೋತ್ರಮ್
ಶ್ರೀಜಯತೀರ್ಥಾಷ್ಟಕಮ್ ಮತ್ತು ಶ್ರೀಜಯತೀರ್ಥ ಸ್ತೋತ್ರಮ್

ಜ್ಞಾನ ಭಕ್ತಿ ವೈರಾಗ್ಯ ಭರಿತರೂ; ಶ್ರೇಷ್ಠ ವಿದ್ವಾಂಸರಾದ ಶ್ರೀ ಐಜಿ ವೇಂಕಟರಾಮಾಚಾರ್ಯರ ಶಿಷ್ಯತ್ವವನ್ನು ವಹಿಸಿ ಗುರು ಶುಶ್ರೂಷನಿರತನಾದ ಜಯತೀರ್ಥನ ಜ್ಞಾನದಾಹ, ವಿಧೇಯತೆ, ಗುರುಭಕ್ತಿ, ಅರ್ಪಣಾಭಾವ ಮುಂತಾದ ಸದ್ಗುಣಗಳು ಶ್ರೀ ಐಜಿ ವೇಂಕಟರಾಮಾಚಾರ್ಯರ ಮನಸ್ಸನ್ನು ಸೆರೆ ಹಿಡಿದವು. ಅಲ್ಲದೇ ಜಯತೀರ್ಥನಿಗೆ ಸಮಗ್ರವಾದ ದ್ವೈತ ವೇದಾಂತ ವಿದ್ಯೆಯನ್ನು ಆಮೂಲಾಗ್ರವಾಗಿ ಪಾಠ ಮಾಡಿ ವಿದ್ವತ್ಪ್ರಪಂಚವೇ ಬೆರಗಾಗುವಂತೆ ಶ್ರೇಷ್ಠ ಪಂಡಿತನನ್ನಾಗಿ ತಯಾರು ಮಾಡಿ ತಮ್ಮ ವಿದ್ಯೆಯನ್ನು ಜಯತೀರ್ಥನಿಗೆ ಧಾರೆಯೆರೆದರು.
ಶ್ರೀ ರಮಾ ಸ್ತೋತ್ರ ಮಹಿಮೆ

ಈ ಅವಧೂತ ಶಿಖಾಮಣಿಗಳು ಪ್ರತಿನಿತ್ಯ ಆಹ್ನೀಕ ಮಾಡುವ ಸಮಯದಲ್ಲಿ ಇವರ ಶಿಷ್ಯರು ಇವರಿಗೆ ತಿಳಿಯದಂತೆ ಒಂದು ತಾಮ್ರದ ಘಟ್ಟಿ ದೊಡ್ಡ ಅರ್ಧಾಣಿಯನ್ನು ಇವರ ಆಸನದ ಬುಡದಲ್ಲಿ ಇಟ್ಟಿರುತ್ತಿದ್ದರು. ೧೪ ಶ್ಲೋಕಗಳಿಂದ ರಮಾ ಸ್ತೋತ್ರವನ್ನು ನಿತ್ಯವೂ ಅಭಿಮಂತ್ರಿಸುತ್ತಿದ್ದರು. ಇವರ ಆಹ್ನೀಕ ಮುಗಿದ ಮೇಲೆ ಆ ಆಸನದ ಬುಡದಲ್ಲಿಯ ಆ ತಾಮ್ರದ ನಾಣ್ಯವು ಚಿನ್ನದ್ದಾಗಿರುತ್ತಿತ್ತು.

ಆ ಚಿನ್ನದ ನಾಣ್ಯವನ್ನು ಮಾರಿ ೨೦೦ ಜನ ಶಿಷ್ಯರಿಗೆ ನಿತ್ಯವೂ ಮೃಷ್ಟಾನ್ನ ಭೋಜನ ನಡೆಯುತ್ತಿತ್ತು. ಈ ರೀತಿ ಒಂದು ವರ್ಷ ನಡೆಯಿತು.

ಇತಿ ದೇವೀ ಸ್ತುವಂ ಪುಣ್ಯಂ ಸರ್ವ ಪಾಪ ಪ್ರಣಾಶನಂ ।
ಯಃ ಪಠೇದ್ ಶೃಣುಯಾದ್ವಾಪಿ ಸ ಮುಕ್ತೋ ನಾತ್ರ ಸಂಶಯಃ ।।

ಶ್ರೀ ಅಡವಿ ಕೃಷ್ಣಾಚಾರ್ಯರು

ಇವರು ಶ್ರೀ ವಿಷ್ಣುತೀರ್ಥರ ಪೂರ್ವಾಶ್ರಮ ಪುತ್ರರು. ಇವರು ಲಘು ಸುಧಾ ರಂಜನೀ ಎಂಬ ನ್ಯಾಯಸುಧಾ ಟಿಪ್ಪಣಿ, ಸುಮನೋರಂಜನೀ ಎಂಬ ತತ್ತ್ವ ಪ್ರಕಾಶಿಕಾ ಟೀಕೆ, ಶ್ರೀ ವಿಷ್ಣುತೀರ್ಥರು ರಚಿಸಿದ ನ್ಯಾಯಸುಧಾ ಸ್ತೋತ್ರಕ್ಕೆ ವ್ಯಾಖ್ಯಾನ ಮತ್ತು ಶ್ರೀ ವಿಷ್ಣುತೀರ್ಥರ ಕುರಿತಾದ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ.

ಶ್ರೀ ಜಯತೀರ್ಥಾಚಾರ್ಯರು ಶ್ರೀ ವಿಷ್ಣುತೀರ್ಥರಾಗಿ ವಿರಾಜಿಸಿದರು

ಉತ್ತರಾದಿ ಮಠದ ಶ್ರೀ ಸತ್ಯವ್ರತೀರ್ಥರು ಶ್ರೀ ಜಯತೀರ್ಥಾಚಾರ್ಯರಿಗೆ ಆಶ್ರಮವನ್ನು ಕೊಟ್ಟು ” ವಿಷ್ಣುತೀರ್ಥ ” ಎಂಬ ಹೆಸರನ್ನು ಶ್ರೀ ಸತ್ಯವರ ತೀರ್ಥರು ನೀಡಿದ್ದು ಅನ್ವರ್ಥಕ ಎನಿಸಿತು. ಶ್ರೀ ಸತ್ಯವರ ತೀರ್ಥರ ಸಚ್ಛಿಷ್ಯರಾದರೂ ಪೀಠಾಧಿಪತ್ಯವನ್ನು ಒಂದರೆಕ್ಷಣವೂ ಬಯಸದೇ ತಪಸ್ಸಂನಾಚರಿಸಲು ಪುನಃ ಅಡವಿಯನ್ನೇ ಸೇರಿದರು.
ಶ್ರೀ ಕೃಷ್ಣಾಷ್ಟಕಮ್ ( ಅಂತ್ಯ ಕಾಲ ಪ್ರಾರ್ಥನಾ ) “

ಇದು ಶ್ರೀ ವಿಷ್ಣುತೀರ್ಥರ ಕೃತಿಗಳಲ್ಲಿಯೇ ಅಪೂರ್ವವಾದ ಕೃತಿ. ಇದರಲ್ಲಿ ಎಂದು ಶ್ಲೋಕಗಳಿವೆ. ಇದು ಸಂಸ್ಕೃತದಲ್ಲಿ ರಚಿತವಾಗಿದೆ. ಪ್ರತಿಯೊಂದು ಪಂಕ್ತಿಯೋ ಮೆಲಕು ಹಾಕುವಂತಿದ್ದು ಭಕ್ತ ಹೃದಯ ತನ್ನ ಅಂತ್ಯ ಕಾಲದ ವರೆಗೂ ಕೂಡಿಟ್ಟು ಕೊಳ್ಳಬೇಕಾದ ಬಹು ಆಪ್ತ ಕೃತಿ ಇದಾಗಿದೆ.

ಶ್ರೀ ವಾಸುದೇವ ಮಧುಸೂದನ ಕೈಟಭಾರೇ
ಲಕ್ಷೀಶ ಪಕ್ಷಿವರ ವಾಹನ ವಾಮನೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೧ ।।

ಗೋವಿಂದ ಗೋಕುಲಪತೇ ನವನೀತ ಚೋರ
ಶ್ರೀ ನಂದನಂದನ ಮುಕುಂದ ದಯಾಪರೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೨ ।।

ನಾರಾಣಾಖಿಲ ಗುಣಾರ್ಣವ ವೇದ
ಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೩ ।।

ಆನಂದ ಸಚ್ಚಿದಾಖಿಲಾತ್ಮಕ ಭಕ್ತ ವರ್ಗ
ಸ್ವಾನನ್ದ ದಾನ ಚತುರಾಗಮ ಸನ್ನುತೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೪ ।।

ಶ್ರೀ ಪ್ರಾಣತೋsಧಿಕ ಸುಖ್ಯಾತಕ ರೂಪ ದೇವ
ಪ್ರೋದ್ಯದ್ದಿವಾಕರ ನಿಭಾಚ್ಯುತ ಸದ್ಗುಣೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೫ ।।

ವಿಶ್ವಾಂಧಕಾರಿ ಮುಖ ದೈವತ ವಂದ್ಯ ಶಾಶ್ವತ್
ವಿಶ್ವೋದ್ಭವಸ್ಥಿತಿಮೃತಿ ಪ್ರಭೃತಿ ಪ್ರದೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೬ ।।

ನಿತ್ತೈಕ ರೂಪ ದಶ ರೂಪ ಸಹಸ್ರ ಲಕ್ಷಾ
ನಂತ ರೂಪ ಶತ ರೂಪ ವಿರೂಪಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೭ ।।

ಸರ್ವೇಶ ಸರ್ವಗತ ಸರ್ವ ಶುಭಾನುರೂಪ
ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೮ ।।

ಶ್ರೀ ರಮಾಸ್ತೋತ್ರಮ್

ಇದು ಶ್ರೀ ವಿಷ್ಣುತೀರ್ಥರ ಮಂತ್ರ ಮತ್ತು ತಪಃಶಕ್ತಿಯನ್ನು ಪ್ರತಿಬಿಂಬಿಸುವ ಸ್ತೋತ್ರ ಮತ್ತು ಐತಿಹಾಸಿಕ ಹಿನ್ನೆಲೆ ಉಳ್ಳದ್ದು.

ಆದಿ :
ಯಯೈವೇದಂ ಸಚ್ಚಿನ್ನಿರುಪಮನಿಜಾನಂದನಿರತಂ
ಪರಬ್ರಹ್ಮಾಪ್ಯಾದೌ ಗುಣಸಮತನೂರಾಪ್ಯ ಸೃಜತಿ ।
ಅವತ್ಯತ್ತಿ ಪ್ರೇಷ್ಟಾನ್ ಪದಮಪಿ ನಯತ್ಯಸ್ತವಿಪದಃ
ಪರ ಬ್ರಹ್ಮಾಣೀ ಸಾ ನಾನು ವಿಜಯತೇ ಮದ್ಧ್ರುದಿ ಸದಾ ।।

ಅಂತ್ಯ :
ಅಟತು ವಿವಿಧದೇಶಂ ಸರ್ವದಾ ಸಪ್ರಯಾಸಂ
ಪಠತು ನಿಖಿಲ ವೇದಾನ್ ಸಂಗಕಾನ್ನಿತ್ಯಮೇವ ।
ಲುಠತು ಸಕಲ ದೇವಾನಾಂ ಪುತಃ ಪಾಂಸು ಮಧ್ಯೇ
ಪಟಲ ವಿಘಟನಂ ಸ್ಯಾತ್ತಾಂ ವಿನಾ ನೈವ ಜಂತೋಃ ।।

ಇತಿ ದೇವೀ ಸ್ತುತಿಂ ಪುಣ್ಯಂ ಸರ್ವ ಪಾಪ ಪ್ರಣಾಶನಮ್ ।
ಯಃ ಪಠೇತ ಶ್ರೂಣುಯಾದ್ವಾಪಿ ಸ ಮುಕ್ತೋ ನಾತ್ರ ಸಂಶಯಃ ।।

ಸುಮಧ್ವ ವಿಜಯ ಪ್ರಮೇಯ ಫಲ ಮಾಲಿಕಾ

ಇದು ಶ್ರೀ ನಾರಾಯಣ ಪಂಡಿತಚಾರ್ಯರಿಂದ ರಚಿತವಾದ 1008 ಶ್ಲೋಕವುಳ್ಳ ಸುಮಧ್ವ ವಿಜಯ ಪಾರಾಯನದಿಂದ ತಮಗೆ ಸಿಕ್ಕ ಫಲವನ್ನು ಕೇವಲ 22 ಶ್ಲೋಕದಲ್ಲಿ ಮೂಲಕ್ಕೆ ಚ್ಯುತಿ ಬಾರದಂತೆ ಗ್ರಂಥದ ಸಾರ ಸರ್ವಸ್ವವನ್ನು ಅತ್ಯಂತ ಸತ್ವಯುತವಾಗಿ ಬಿಂಬಿಸುವ ಈ ಕೃತಿ ಶ್ರೀ ವಿಷ್ಣುತೀರ್ಥರ ಪಾಂಡಿತ್ಯಕ್ಕೂ, ಪ್ರತಿಭಾ ಸಾಮಥ್ಯಕ್ಕೂ ಹಿಡಿದ ಕೈಗನ್ನಡಿಯಾಗಿದೆ.

ಆದಿ :
ಶ್ರೀ ಮಧ್ವ ವಿಜಯೇ ಸರ್ಗಾಃ ಷೋಡಶಾನುಕ್ರಮಾವಹಮ್ ।
ತೇಷಾಂ ಪ್ರಮೇಯಂ ವಕ್ಷ್ಯಾಮಿ ಸಂಗ್ರಹೇಣ ಫಲಂ ತಥಾ ।।

ಅಂತ್ಯ :
ಇತ್ತಂ ಸುಮಧ್ವ ವಿಜಯೇ ಪ್ರಮೇಯ ಫಲ ಮಾಲಿಕಾ ।
ರಚಿತ ಭಿಕ್ಷುಣಾ ಭೂಯಾದ್ವಿಷ್ಣುವಕ್ಷಃಸ್ಥಲಾಶ್ರಿತಾ ।।

ಅಧ್ಯಾತ್ಮಾಮೃತ ರಸರಂಜನೀ

49 ಶ್ಲೋಕಗಳುಳ್ಳ ” ಆಧ್ಯಾತ್ಮಾಮೃತ ರಸರಂಜನೀ ” ಯೆಂಬ ಕೃತಿಯಲ್ಲಿ ಮನೋದೋಷ ನಿರಸನ ಪ್ರಕರಣ: ಧ್ಯಾನ ಪ್ರಕರಣ ಮತ್ತು ಸರ್ವ ಸಮರ್ಪಣ ಪ್ರಕರಣಗಳ ಕುರಿತು ತಿಳಿಸುವ ಕೃತಿ.

ಆದಿ :
ಪಾಹಿ ಪಾಂಡವಪಾಲ ಕಾಮಿತ ಪಾಪಿನಂ ಭವತಾಪತೋ
ಏಹಿ ಮಾನಸಮಂದಿರಾಂಗಣ ದೇಶಮೀಶ ನಮೋಸ್ತುತೇ ।
ಪುತ್ರಮಿತ್ರಕಲತ್ರಪೂರ್ವಕ ಮತ್ರಗಂ ನ ಪರತ್ರಗಂ
ಯತ್ರ ಯತ್ರ ಗತಿರ್ಮಮೇಶ್ವರ ತತ್ರ ತೇsಸ್ತಿ ಪದಾಂಬುಜಮ್ ।।

ಅಂತ್ಯ :
ದೋಷೇತಾsಪಿ ಮದೇಯಾ ವಾಗ್ಧಾರ್ಯೈವ ಧರಣೀಸುರೈಃ ।
ಶ್ಲಾಘ್ಯತೇ ಗುಣಲುಬ್ಧರ್ಹಿ ಕಂಟಕೇತಾಪಿ ಕೇತಕೀ ।।

ಮುಕ್ತಮಾಲಾ ” ( ಭಗವದ್ಗೀತಾ ಸಾರೋದ್ಧಾರ )

ಕೇವಲ 20 ಶ್ಲೋಕಗಳಲ್ಲಿ  18 ಅಧ್ಯಾಯಗಳ 700 ಶ್ಲೋಕಗಳ ಸಾರವನ್ನು ಶ್ರೀ ವಿಷ್ಣುತೀರ್ಥರು ಸಂಗ್ರಹಿಸಿ ಕೊಟ್ಟಿದ್ದಾರೆ.

ಆದಿ :
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯಃ ।।

ಅಂತ್ಯ :
ಅವಧೂತ ಶಿರೋರತ್ನ ಜಯತೀರ್ಥಾರ್ಯ ನಿರ್ಮಿತಾ ।
ಮುಕ್ತಮಾಲಾsನಸಂಧೇಯಾ ಪರತತ್ತ್ವ ಪರೀಕ್ಷಕೈಃ ।।

ನ್ಯಾಯಸುಧಾ ಸ್ತೋತ್ರ

ಶ್ರೀ ಜಯತೀರ್ಥರ ಮೇರು ಕೃತಿಯಾದ ಶ್ರೀಮನ್ನ್ಯಾಯಸುಧಾ ಗ್ರಂಥವನ್ನು ಕೊಂಡಾಡುವ 8 ಶ್ಲೋಕಗಳುಳ್ಳ ಸ್ತೋತ್ರ ರತ್ನವಿದು. ಶ್ರೀ ಟೀಕಾಕೃತ್ಪಾದರ ಗ್ರಂಥಗಳನ್ನು ಭಕ್ತಿ ಶ್ರದ್ಧೆಗಳಿಂದ ಅಧ್ಯಯನ ಮಾಡುವವರು ಈ ಭವ ಬಂಧನದಲ್ಲಿ ಪುನಃ ಬೀಳುವುದೇ ಇಲ್ಲವೆಂದು ಒತ್ತಿ ಹೇಳುವ ಕೃತಿ.

ಆದಿ :
ಯದು ತಾಪಸಲಭ್ಯಮನಂತ ಭವೈ
ಸ್ತದುತೋ ಪರತತ್ತ್ವಮಿಹೈಕ ಪದಾತ್ ।
ಜಯತೀರ್ಥ ಕೃತೌ ಪ್ರವಣೋ ನ ಪುನ
ರ್ಭವ ಭಾಗ್ಭವತೀತಿ ಮತಿರ್ಹಿ ಮಮ ।।

ಅಂತ್ಯ :
ದಶಮಾಂತ್ಯಪತಿಸ್ಸದನಂ ನ ಕದಾ
ಪೃಥ ಮುಂಚತಿ ಯತ್ವ್ಸಯಮೇವ ರಸಾತ್ ।
ಜಯತೀರ್ಥ ಕೃತೌ ಪ್ರವಣೋ ನ ಪುನ
ರ್ಭವ ಭಾಗ್ಭವತೀತಿ ಮತಿರ್ಹಿ ಮಮ ।।

ಭಾಗವತ ಧರ್ಮ ಸ್ತೋತ್ರ

8 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಭಾಗವತ ಧರ್ಮದ ಹಿರಿಮೆಯನ್ನೂ; ಭಗವದ್ಭಕ್ತರ ಮಹಿಮೆಯನ್ನೂ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ ಶ್ರೀ ವಿಷ್ಣುತೀರ್ಥರು.

ಆದಿ :
ಯತ ಏವ ಇಹೈವ ವಸಂತಿ ಸುಖಂ
ಸುಖತೀರ್ಥ ಸುತೀರ್ಥ ಸುವೃದ್ಧಿಪರಾಃ ।
ನಹಿ ಕಾಲ ಬಲಂ ಹರಿಪಾದ ರಜೋ
ಧುತ ಪಾಪ ಗಣೇಷು ಜನೇಷು ಸದಾ ।।

ಅಂತ್ಯ :
ಯದಮುತ್ರ ಯಮೋsಪಿ ಸಮಸ್ಸಖಿಭಿ
ರ್ಭವತೀಶ ಪದಾನುಗಜಾತಯತಃ ।
ನಹಿ ಕಾಲ ಬಲಂ ಹರಿಪಾದ ರಜೋ
ಧುತ ಪಾಪ ಗಣೇಷು ಜನೇಷು ಸದಾ ।।

ಉಪದೇಶ ಪತ್ರ

ಶ್ರೀ ವಿಷ್ಣುತೀರ್ಥರಿಗೆ ತಮ್ಮ ಶಿಷ್ಯರಾದ ಗೋಕಾವಿ ಅನಂತಾದ್ರೀಶರಲ್ಲಿ ಎಂಥಹಾ ಅಂತಃಕಾರಣವಿತ್ತು. ಸಾಧನೆಯ ಸತ್ಪಥದಲ್ಲಿ ಅವರನ್ನು ಸುರಕ್ಷಿತವಾಗಿ ಮುನ್ನಡೆಸುವ ಕಳಕಳಿಯಿತ್ತು ಎಂಬುದನ್ನು ಈ ಉಪದೇಶ ಪತ್ರದಿಂದ ವ್ಯಕ್ತವಾಗುತ್ತದೆ. ಇದು ಕನ್ನಡದಲ್ಲಿ ಬರೆಯಲ್ಪಟ್ಟ ಪತ್ರ.

ಆಜ್ಞಾ ಪತ್ರಮ್

ಉಪದೇಶ ಪತ್ರದಲ್ಲಿ ಉದ್ಹೃತವಾದ ಬಹುತೇಕ ವಿಷಯಗಳನ್ನೊಳಗೊಂಡ ಸಂಸ್ಕೃತದ ” ಆಜ್ಞಾ ಪತ್ರ ” ವನ್ನು ಸ್ವತಃ ಶ್ರೀ ವಿಷ್ಣುತೀರ್ಥರೇ ತಮ್ಮ ಶಿಷ್ಯರ ಮಾರ್ಗದರ್ಶನಕ್ಕಾಗಿ ಹೊರಡಿಸುತ್ತಿದ್ದರು.

ಆತ್ಮ ಸುಖಬೋಧಿನಿ ಪತ್ರಿಕಾ

ಪರಮಾತ್ಮನ ಅನುಗ್ರಹದಿಂದಲೇ ಜೀವರಿಗೆ ಸ್ವರೂಪ ಸುಖ ಸಾಧ್ಯ ಎಂಬುದನ್ನು ನಿರೂಪಿಸಲು ಹೊರಟಿರುವ ಕೃತಿ. ಇದು ಕನ್ನಡದಲ್ಲಿ ರಚಿತವಾಗಿದೆ.

ಬಿಂಬಾರ್ಪಣ ವಿಧಿಃ

ಸರ್ವ ಕರ್ಮಗಳನ್ನೂ ಬಿಂಬ ರೂಪಿ ಭಗವಂತನಿಗೆ ಸಮರ್ಪಿಸುವ ” ಬಿಂಬಾರ್ಪಣ ವಿಧಿಃ ” ಶ್ರೀ ವಿಷ್ಣುತೀರ್ಥರ ಸಂಸ್ಕೃತ ಭಾಷೆಯ ಸುಲಲಿತ ಶೈಲಿಯಲ್ಲಿ ರಚಿಸಿರುವ ಗದ್ಯ ಕೃತಿಯಾಗಿದೆ.

ಶ್ರೀಮನ್ನ್ಯಾಯಸುಧಾಟಿಪ್ಪಣಿ ” ( ರಸ ರಂಜನೀ )

ಶ್ರೀಮನ್ನ್ಯಾಯಸುಧಾ ಗ್ರಂಥದ ಮೂಲದರ್ಥವನ್ನು ಸಜ್ಜನರಿಗೆ ತಿಳಿಯ ಪಡಿಸಲೆಂದೇ ಶ್ರದ್ಧೆಯಿಂದ ತಮ್ಮೆಲ್ಲಾ ಪ್ರತಿಭಾ ಸಾಮರ್ಥ್ಯವನ್ನು ಕ್ರೋಢೀಕರಿಸಿ ” ಶ್ರೀಮನ್ನ್ಯಾಯಸುಧಾ ಟಿಪ್ಪಣಿ ” ಯನ್ನು ರಚಿಸಿದ್ದಾರೆ.

ಷೋಡಶೀ

ಅಮೂಲ್ಯವಾದ ಅನೇಕ ಪ್ರಮೇಯ ಪುಂಜಗಳಿಂದ ಕೂಡಿದ ಈ ದೀರ್ಘ ರಚನೆಯಲ್ಲಿ…

ಬಂಧಕ, ಬಂಧಕ ನಿವೃತ್ತಿ, ಬಿಂಬ ಪ್ರತಿಬಿಂಬ ಭಾವ, ಬಿಂಬ ಸ್ಥಾಪನಾ, ಸ್ಥೂಲ ಶರೀರ ಸೃಷ್ಠಿ, ಅವಸ್ಥಾತ್ರಾಯ ನಿರ್ಮಾಣ, ಪ್ರಾಣ ವ್ಯಾಪಾರ, ಭೋಜನ, ಇಂದ್ರಿಯ ವ್ಯಾಪಾರ, ತತ್ತ್ವಕಾರ್ಯ, ರಥಾದಿ, ಜಾಗೃತ, ಸ್ವಪ್ನ, ಸುಷುಪ್ತಿ, ಗಮನಾಗಮನ ಮತ್ತು ಮೋಕ್ಷ ಎಂಬ 16 ಪ್ರಕರಣಗಳಿದ್ದು ” ಷೋಡಶೀ ” ಯೆಂಬ ಹೆಸರನ್ನು ಅನ್ವರ್ಥಗೊಳಿಸಿದೆ.

ಚತುರ್ದಶೀ

ಜೀವ ಹೋಮ, ಉಪನಯನ, ಸೂರ್ಯಗತಿ, ಆಯುರ್ಯಜ್ಞ, ವೇದಾಧ್ಯಯನ, ಭಿಕ್ಷಾಟನೆ, ಭೋಜನ, ಪಾಪಲೇಪ, ಜೀವ ಪ್ರಯಾಣ ಮಾರ್ಗ, ಬ್ರಹ್ಮಯಜ್ಞ, ಶುದ್ಧಯಜ್ಞ, ಸ್ವರೂಪಯಜ್ಞ, ಸುಲಭ ಪೂಜೆ, ಗುರು ಪ್ರಸಾದ ಲಾಭ ಯೆಂಬ 14 ಪ್ರಕರಣಗಳೊಂದಿಗೆ ಅತ್ಯಮೂಲ್ಯವಾದ ಪ್ರಮೇಯಗಳನ್ನೊಳಗೊಂಡ ಕೃತಿ.

ತತ್ತ್ವ ಪ್ರಕಾಶಿಕಾ ಟಿಪ್ಪಣಿ ” ( ಸುಮನೋರಂಜನೀ )

ಶ್ರೀಮಜ್ಜಯತೀರ್ಥರ ಕೃತಿ ರತ್ನವಾದ ತತ್ತ್ವಪ್ರಕಾಶಿಕೆಗೆ ಟಿಪ್ಪಣಿಯನ್ನು ಬರೆದು ಅದನ್ನು ” ಸುಮನೋರಂಜನೀ ” ಯೆಂದು ಕರೆದಿದ್ದಾರೆ.

ಧ್ಯಾನ ( ಸ್ನಾನ ) ವಿಧಿಃ

ಧ್ಯಾನ ಸ್ನಾನ ನಿಷ್ಣಾತರಾದ ಶ್ರೀ ಅಡವಿ ಸ್ವಾಮಿಗಳು ಧ್ಯಾನ ಸ್ನಾನ ವಿಧಿಯನ್ನು ತಿಳಿಸುವ ಈ ಮಹತ್ವ ಪೂರ್ಣ ಕೃತಿಯನ್ನು ರಚಿಸಿ ಸಾಧಕರಿಗೆ ಉಪಕಾರ ಮಾಡಿದ್ದಾರೆ.

ಶ್ರೀಮದ್ಭಾಗವತ ಸಾರೋದ್ಧಾರ

ಗೀತಾಸಾರೋದ್ಧಾರದಂತೆ ಶ್ರೀಮದ್ಭಾಗವತಸಾರೋದ್ಧಾರವೂ ಶ್ರೀ ಅಡವಿ ಸ್ವಾಮಿಗಳಿಂದ ರಚಿತವಾದ ಅಪೂರ್ವ ಕೃತಿ. ಪ್ರತಿಯೊಂದು ಶ್ಲೋಕಗಳಿಗೂ ಶ್ರೀಮದ್ಭಾಗವತದಲ್ಲಿ ಅಡಗಿರುವ ಅರ್ಥ ರತ್ನಗಳನ್ನು ಎತ್ತಿ ತೋರುವ ಅವರ ನಿರೂಪಣಾ ಕೌಶಲ್ಯ ಅತ್ಯದ್ಭುತವಾಗಿದೆ.

ಶ್ರೀಮದ್ಭಾಗವತಧೃತಸಾರಃ

ಶ್ರೀಮದ್ಭಾಗವತಧೃತಸಾರದಲ್ಲಿ ಶ್ರೀ ಅಡವಿ ಸ್ವಾಮಿಗಳು ಶ್ರೀಮದ್ಭಾಗವತದ ಪ್ರತಿ ಸ್ಕಂದಕ್ಕೂ ಅರ್ಥ ವ್ಯಾಪ್ತಿಯನ್ನು ಸಮಗ್ರವಾಗಿ ಬಿಂಬಿಸುವ 3 ಶ್ಲೊಕಗಳಂತೆ 12 ಸ್ಕಂದಗಳಿಂದ 36 ಶ್ಲೋಕಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.

ಬಿಂಬ ಸ್ತುತಿಃ

68 ಶ್ಲೋಕಗಳುಳ್ಳ ಈ ಕೃತಿಯಲ್ಲಿ ಬಿಂಬ ರೂಪಿ ಪರಮಾತ್ಮನು ಜೀವಿಗಳ ವಿವಿಧ ಅಂಗಾಂಗಗಳಲ್ಲಿ; ವಿವಿಧ ರೂಪಗಳಲ್ಲಿ; ವಿವಿದ ರೂಪಗಳಿಂದ ನೆಲೆಸಿ ಹೇಗೆ ವಿಧ ವಿಧ ಕಾರ್ಯಗಳನ್ನು ನಿರ್ವಹಿಸುವನೆಂಬ ವಿಷಯ ತುಂಬಾ ಸೊಗಸಾಗಿ ವರ್ಣಿತವಾಗಿದೆ.

ಶ್ರೀ ಅಚ್ಯುತಾನಂತ ಸ್ತೋತ್ರಮ್

ಇದರಲ್ಲಿ 8 ಶ್ಲೋಕಗಳಿದ್ದು ಸರಳ ಸುಂದರವಾಗಿ ರಚಿತವಾಗಿದೆ. ಸಂಗೀತ ಬದ್ಧವಾದ ಈ ಕೃತಿಯಲ್ಲಿ ಪರಮಾತ್ಮನ ಗುಣಗಳನ್ನು ಮುಕ್ತಕಂಠದಿಂದ ಕೊಂಡಾಡಿದ ಕೃತಿ.

ಶ್ರೀ ಜಯತೀರ್ಥಾಷ್ಟಕಮ್ ಅಥವಾ ಶ್ರೀ ಜಯತೀರ್ಥ ಸ್ತೋತ್ರಮ್

ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಶ್ರೀ ಜಯತೀರ್ಥರ ಗುಣಗಾನ ಮತ್ತು ಅವರ ಮಹಿಮಾನ್ವಿತ ವ್ಯಕ್ತಿತ್ವವನ್ನು ಸಮರ್ಥವಾಗಿ ಬಿಂಬಿಸಿದ್ದಾರೆ.

ಅವತಾರ ಸಮಾಪ್ತಿ

ಶ್ರೀ ಕೃಷ್ಣನ ಜಯಂತೀಯಂದು ಅವತರಿಸಿ; ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗುವ ಉತ್ಕೃಷ್ಟವಾದ ಕಾರ್ಯಗಳನ್ನು ಮಾಡಿ; ನಂಬಿ ಬಂದ ಶಿಷ್ಟ ಜನರಿಗೆ ಶ್ರೇಷ್ಠವಾದ ಶ್ರೀ ಕೃಷ್ಣ ಪಥವನ್ನು ತೋರಿಸಿ; ಭಕ್ತ ವೃಂದದ ಇಷ್ಟಾರ್ಥವನ್ನು ಸಲ್ಲಿಸಲು; ಕ್ರಿ ಶ 1806 ರಲ್ಲಿ ಶ್ರೀ ಕೃಷ್ಣ ಸಖರೂ, ವೈಷ್ಣವೋತ್ತಮರೂ ಆದ ಶ್ರೀ ರುದ್ರದೇವರ ಜಯಂತೀ ದಿನವಾದ ಶಿವರಾತ್ರಿಯೆಂದು ಶ್ರೀ ವಿಷ್ಣುತೀರ್ಥರು ಕೃಷ್ಣಾ ನದೀ ತೀರದಲ್ಲಿರುವ ಮಾದನೂರಿನಲ್ಲಿ ವೃಂದಾವನಸ್ಥರಾದರು.

ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।

ಶ್ರೀವಿಷ್ಣುತೀರ್ಥರ ಜೀವನ
1756 ಗೋಕುಲಾಷ್ಠಮಿಯಂದು ಜನನ
50 ವರ್ಷಗಳ ಜೀವನ
ಅಪಾರ ಸಾಧನ
ಚತುರಾಶ್ರಮ ಪರಿಪಾಲನ
ಶ್ರೀವ್ಯಾಸತತ್ವಜ್ಞರ ಮಿಲನ
ಗುರುಪುತ್ರರ ಅಕಾಲಮೃತ್ಯು ಪರಿಹರಣ
ಆಲಿಸಿದರು ಭಜನ
ಕಳಚಿದರು ಸಂಸಾರ ಬಂಧನ
ಮಾಡಿದರು ಭಾಗವತದ ಚಿಂತನ
21 ಗ್ರಂಥಗಳ ರಚನ
ಬರಗಾಲ ನಿವಾರಣ
ಪಡೆದರು ಬದರೀನಾರಾಯಣನ ದರ್ಶನ
ಮಾಡಿದರು ಗೋಪಾಲಕೃಷ್ಣನ ಉಪಾಸನ
1806 ಶಿವರಾತ್ರಿಯಂದು ಬೃಂದಾವನ
ಇವರೆಂದರೆಲ್ಲರಿಗೆ ಅಭಿಮಾನ
ಇಂದಾಯಿತವರ ವಿಚಾರ ಮನನ
ಗುರುಗಳಿಗೆ ಸಾಷ್ಠಾಂಗ ನಮನ

Leave a Reply

Your email address will not be published. Required fields are marked *