Tag «Rayaru»

ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ.

ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ. ಇಂತಹ ವಿದ್ವಾಂಸರಾದ ಶ್ರೇಷ್ಠಕರ್ತೃಗಳಿಂದ ರಚಿತವಾದ, ಸಕಲ ಸಲ್ಲಕ್ಷಣಗಳಿಂದ ಉಪೇತವಾದ ಈ ಮಹಾಕಾವ್ಯವು ಸಜ್ಜನರಿಗೆ ಅತ್ಯಂತ ಗ್ರಾಹ್ಯವಾಗಿದೆ. ಶೈಲಿ, ಪ್ರೌಢಿಮೆ, ವಿಷಯನಿರೂಪಣೆ, ಕಾವ್ಯಲಕ್ಷಣಗಳಲ್ಲಿ ಇದು ಶ್ರೀಸುಮಧ್ವವಿಜಯವನ್ನೇ ಹೋಲುತ್ತದೆ. ಶ್ರೀಸುಮಧ್ವವಿಜಯದ ಕರ್ತೃಗಳಾದ ಶ್ರೀನಾರಾಯಣಪಂಡಿತಾಚಾರ್ಯರೇ ಈ ಮಹಾಕಾವ್ಯರಚನೆಗೆ ಸ್ಫೂರ್ತಿ ಎನ್ನುವುದು ಎಂದು ಶ್ರೀರಾಘವೇಂದ್ರವಿಜಯ ಕರ್ತೃಗಳಾದ ನಾರಾಯಣಾಚಾರ್ಯರ ಮಾತುಗಳಿಂದಲೇ ತಿಳಿಯಬಹುದು.ಅಂತೆಯೇ ಶ್ರೀಸುಮಧ್ವವಿಜಯದ ಪಾರಾಯಣ-ಪ್ರವಚನಗಳು ಸಕಲ ಐಹಿಕ-ಪಾರಮಾರ್ಥಿಕ ಸಂಪತ್ತನ್ನು ಕರುಣಿಸುವಂತೆ, ಶ್ರೀರಾಘವೇಂದ್ರವಿಜಯವೂ ಈ ವಿಷಯದಲ್ಲಿ ಸಮರ್ಥವಾಗಿದೆ ಎನ್ನುವುದರಲ್ಲಿ ಲೇಶಸಂಶಯವೂ ಇಲ್ಲ. ಈ ರೀತಿ ಶ್ರೀರಾಘವೇಂದ್ರ ಗುರುಗಳ ಪೂರ್ವಾಶ್ರಮಜೀವನ, ಯತ್ಯಾಶ್ರಮಜೀವನವನ್ನು …